ಕುರಾನ್ - 74:2 ಸೂರೆ ಅಲ್-ಮುದ್ದಸ್ತಿರ ಅನುವಾದ, ಲಿಪ್ಯಂತರಣ ಮತ್ತು ತಫ್ಸೀರ್ (ತಫ್ಸೀರ್).
[1] ಇಸ್ರಾಯೇಲರಲ್ಲಿ ಒಬ್ಬ ಮಕ್ಕಳಿಲ್ಲದ ಶ್ರೀಮಂತ ವ್ಯಕ್ತಿಯಿದ್ದ. ಅವನ ಸೋದರಳಿಯ ಮಾತ್ರ ಅವನ ವಾರೀಸುದಾರನಾಗಿದ್ದ. ಒಂದು ರಾತ್ರಿ ಸೋದರಳಿಯ ಚಿಕ್ಕಪ್ಪನನ್ನು ಕೊಂದು ಶವವನ್ನು ಬೇರೊಬ್ಬ ವ್ಯಕ್ತಿಯ ಮನೆಯ ಬಾಗಿಲ ಬಳಿ ಹಾಕಿದ. ಬೆಳಗಾದಾಗ, ಕೊಲೆಗಾರನ ಹುಡುಕಾಟದಲ್ಲಿ ಇಸ್ರಾಯೇಲರು ಪರಸ್ಪರ ಜಗಳ ಮಾಡತೊಡಗಿದರು. ಅಂತಿಮವಾಗಿ, ವಿಷಯವು ಮೂಸಾರ (ಅವರ ಮೇಲೆ ಶಾಂತಿಯಿರಲಿ) ಬಳಿ ತಲುಪಿತು. ಆಗ ಅವರು, "ಒಂದು ಹಸುವನ್ನು ಕೊಯ್ದು ಅದರ ಒಂದು ಅಂಗದಿಂದ ಸತ್ತ ವ್ಯಕ್ತಿಗೆ ಬಡಿಯಿರಿ; ಆಗ ಆತ ಜೀವಂತ ಎದ್ದು ಕೊಲೆಗಾರ ಯಾರೆಂದು ಹೇಳುತ್ತಾನೆ" ಎಂದರು. ಮೂಸಾರ ಮಾತು ಕೇಳಿದಾಗ ಅವರೆಲ್ಲರೂ ಗೊಳ್ಳೆಂದು ನಕ್ಕರು.